ಪೊಲೀಸ್ ಪ್ರಧಾನ ಕಛೇರಿ, ಮಧ್ಯಾಹ್ನ 3:00 PMACP ಕೃಷ್ಣ ತನ್ನ ಕಛೇರಿಯಲ್ಲಿ ಗಣಿತದ ಸೂತ್ರವನ್ನು ವಿಶ್ಲೇಷಿಸುತ್ತಿದ್ದಾರೆ. ಅವರ ಸುತ್ತ ಕ್ರೇಜಿ ಕಳ್ಳನ ಕಳ್ಳತನದ ಎಲ್ಲಾ ಕಡತಗಳಿವೆ. ಅವರು ಸೂತ್ರದ ಮೂಲಕ 'ಶಕ್ತಿ' ಎಂಬ ಹೆಸರಿನ ಅಕ್ರಮ ಹಣ ವರ್ಗಾವಣೆಯ ಗುಪ್ತ ಮಾರ್ಗದ ಬಗ್ಗೆ ಸಣ್ಣ ಸುಳಿವನ್ನು ಕಂಡುಕೊಳ್ಳುತ್ತಾರೆ.ಕೃಷ್ಣ: (ಸ್ವಗತ) ಈ ಸೂತ್ರ ಹಣವನ್ನು ಕದ್ದಿಲ್ಲ. ಆದರೆ ಹಣದ ಹಾದಿ ತೋರಿಸುತ್ತಿದೆ. ಈ ಕ್ರೇಜಿ ಕಳ್ಳನಿಗೆ ಹಣ ಬೇಕಾಗಿಲ್ಲ, ನ್ಯಾಯ ಬೇಕಾಗಿರಬಹುದು ಅಥವಾ ಇದು ಆಟ ಮಾತ್ರವೇ?ಇದೇ ಸಮಯದಲ್ಲಿ, ಪೊಲೀಸ್ ಕಂಟ್ರೋಲ್ ರೂಂನಿಂದ ಕೃಷ್ಣನಿಗೆ ಕರೆ ಬರುತ್ತದೆ.ಕಂಟ್ರೋಲ್ ರೂಂ ಅಧಿಕಾರಿ: ಸರ್, ಅಲಾರಾಂ. ನಗರದ ಅತ್ಯಂತ ಪುರಾತನ 'ಐತಿಹಾಸಿಕ ವಸ್ತು ಸಂಗ್ರಹಾಲಯ'ದಿಂದ (ಮ್ಯೂಸಿಯಂ) ತುರ್ತು ಕರೆ. ಅತ್ಯಂತ ಅಪರೂಪದ ಅಶೋಕ ಕಾಲದ ಕತ್ತಿಯನ್ನು ಕದಿಯಲು ಪ್ರಯತ್ನ ನಡೆದಿದೆ.ಕೃಷ್ಣ: (ತಕ್ಷಣ ಎದ್ದು ನಿಲ್ಲುತ್ತಾ) ಆ ಕತ್ತಿ ಅದು ಅತ್ಯಂತ ಭದ್ರವಾದ ವಿಭಾಗದಲ್ಲಿದೆ. ಕೂಡಲೇ ಎಲ್ಲರೂ ಹೊರಡಿ ಈ ಬಾರಿ ಆ ಕ್ರೇಜಿ ಕಳ್ಳನ ಕೈಗೆ