ಅಪ್ಪ ಅಭಿ ಬಗ್ಗೆ ಹೇಳಿ ಕೋಪದಿಂದ ಅಲ್ಲಿಂದ ಹೊರಟ ಮೇಲೆ ನಯನಾ ಮೌನವಾಗಿ ಕೂತು ಬಿಡ್ತಾಳೆ. ಸಾವಿರ ಪ್ರಶ್ನೆ ಅವಳಿಗೆ ಬಂದು ಕಾಡೋಕೆ ಶುರು ಆಗುತ್ತೆ. ಇಷ್ಟು ದಿನ ಅಭಿ ಬಗ್ಗೆ ಒಂದು ಅಭಿಪ್ರಾಯ ಇದ್ದಾ ಅವಳಿಗೆ ಈಗ ಅಪ್ಪನ ಮಾತಿಂದ ಅದೆಲ್ಲಾ ತಲೆ ಕೇಳಗಾಗಿ ಬಿಡುತ್ತೆ. ತುಂಬಾ ಯೋಚ್ನೆ ಮಾಡೋಕೆ ಶುರು ಮಾಡ್ತಾಳೆ. ವಿಶ್ವನಾಥ್ ಮಗಳ ಹತ್ತಿರ ಹಾಗೇ ಮಾತಾಡಿದ ಮೇಲೆ ಯಾಕೋ ಅವರಿಗೂ ತಪ್ಪು ಮಾಡಿದೆ ಅಂತ ಅನ್ನಿಸಿತು. ರಾತ್ರಿ ಸೂಪರ್ ಮಾರ್ಕೆಟ್ ನಾ ಕ್ಲೋಸ್ ಮಾಡೋ ಟೈಮ್ ಗೆ ವಿಶ್ವನಾಥ್ ಆಫೀಸ್ ರೂಮ್ ಗೆ ಬರ್ತಾರೆ. ನಯನಾ ಟೇಬಲ್ ಮೇಲೆ ತಲೆ ಇಟ್ಟ್ಕೊಂಡು ಮಲಗಿರೋದನ್ನ ನೋಡಿ. ನಯನಾ ಅಂತ ಕರೀತಾರೆ.ನಯನಾ,,, ಅಪ್ಪನ ಮಾತಿಗೆ ತಲೆ ಎತ್ತಿ ನೋಡ್ತಾಳೆವಿಶ್ವ,,,, ಟೈಮ್ ಆಯ್ತು ಬಾ ಮನೆಗೆ ಹೋಗೋಣ.ನಯನಾ,,, ಹ್ಮ್ ನಡೀರಿ ಅಪ್ಪ ಅಂತ ಹೇಳಿ ಎದ್ದು ಅಪ್ಪನ ಜೊತೆಗೆ ಸೂಪರ್ ಮಾರ್ಕೆಟ್ ಹೊರಗೆ ಬರ್ತಾರೆ ಇಬ್ಬರು.ನಿರಂಜನ್ ರಾಜ್