ಪ್ರಿಯಾ ಅಭಿ ಬಗ್ಗೆ ಯೋಚ್ನೆ ಮಾಡ್ತಾ ಇದ್ದಾ ನಯನಾ ಗೆ ಒಂದು ರೀತಿ ಭಯ ಆಗೋಕೆ ಶುರುವಾಯ್ತು. ಅದ್ರೆ ಅದನ್ನೆಲ್ಲಾ ಕಂಟ್ರೋಲ್ ಮಾಡಿಕೊಳ್ಳೋಕೆ ಶುರು ಮಾಡಿದಳು. ಚೇರ್ ಗೆ ತಲೇನ ಹೊರಗಿಸಿಕೊಂಡು, ಕಣ್ ಮುಚ್ಚಿಕೊಂಡು ಯೋಚ್ನೆ ಮಾಡೋಕೆ ಶುರು ಮಾಡಿದಳು. ನಾನ್ ಯಾಕ್ ಅವರ ಬಗ್ಗೆ ಅಭಿ ಬಗ್ಗೆ ಇಷ್ಟೆಲ್ಲಾ ಯೋಚ್ನೆ ಮಾಡ್ತಾ ಇದ್ದೀನಿ. ರಾತ್ರಿ ನೇ ಅವನಿಗೆ ಅಷ್ಟೆಲ್ಲ ಹೇಳಿ ಈಗ ನಾನೆ, ಛೇ ಇಲ್ಲಾ ಯಾವುದೇ ಕಾರಣಕ್ಕೂ ಅವನು ನನ್ನ ಗಂಡ ಅಲ್ಲ, ಆಗೋದು ಇಲ್ಲಾ. ಆಗೋಕೆ ಸಾಧ್ಯ ಕೂಡ ಇಲ್ಲಾ. ನಾನೇನು ಅವನನ್ನ ಇಷ್ಟ ಪಟ್ಟು ಮದುವೆ ಆಗಿಲ್ಲ. ಅವನು ಕೂಡ ಅಷ್ಟೇ ಕೇವಲ ನನ್ನ ಮದುವೆ ಆಗಿದ್ದು ದುಡ್ಡಿಗೋಸ್ಕರ, ಹೌದು ದುಡ್ಡಿಗೋಸ್ಕರ ನೇ ಅಭಿ ನನ್ನ ಮದುವೆ ಆಗಿದ್ದು, ಅಪ್ಪ ನಾ ಹತ್ತಿರ ಮಾತಾಡಿದ್ದನ್ನ ನಾನೆ ಕೇಳಿದ್ದೀನಿ. ಅಂತ ದುಡ್ಡಿನ ದುರಾಸೆ ಇರೋ ಅವನು ನನಗೆ ಗಂಡ ಆಗೋಕೆ ಸಾಧ್ಯ ಇಲ್ಲಾ, ನನ್ನ