ಅಭಿನಯನಾ - 3

  • 150
  • 72

    ನಯನಾ ಮಗಳಿಗೆ ಊಟ ಮಾಡಿಸ್ತಾ ಅಮ್ಮನ ಜೊತೆಗೆ ಮಾತಾಡ್ತಾ ಇರ್ತಾಳೆ. ಸುಭದ್ರ ಅವರು ಊಟ ಮಾಡ್ತಾ ಮಗಳ ಜೊತೆಗೆ ಮತ್ತೆ ಮೊಮ್ಮಗಳ ಜೊತೆಗೆ ಮಾತಾಡ್ತಾ ಇರ್ತಾರೆ. ಅನಾ,,, ಮುದ್ದು ಮುದ್ದಾಗಿ ಅಜ್ಜಿ ನೀನು ಯಾವಾಗೂ ಯಾಕೆ ತಾತ ಊಟ ಮಾಡೋವರೆಗೂ ಊಟ ಮಾಡಲ್ಲ ತಿಂಡಿ ತಿನ್ನಲ್ಲ.ಸುಭದ್ರ,,, ಮೊಮ್ಮಗಳ ಮಾತಿಗೆ, ಯಾಕೆ ಅಂದ್ರೆ ಅವರು ನನ್ನ ಗಂಡ, ಅವರು ನನಗೆ ಯಾವುದೇ ಕಷ್ಟ ಬಾರದ ಹಾಗೇ ತುಂಬಾ ಪ್ರೀತಿ ಯಿಂದ ನೋಡ್ಕೋತಾರೆ, ನಾನು ಅವರನ್ನ ಅಷ್ಟೇ ಪ್ರೀತಿಯಿಂದ ನೋಡ್ಕೋಬೇಕು ಅಲ್ವಾ, ಅದಕ್ಕೆ ಏನೇ ಇದ್ರು ಅವರ ನಂತರ ನನಗೆ. ಅನಾ,,, ಹೌದ? ಮತ್ತೆ ಪಪ್ಪಾ ಯಾಕೆ ಮನೇಲಿ ಒಂದು ದಿನ ಕೂಡ ಊಟ ತಿಂಡಿ ಏನು ಮಾಡಲ್ಲ. ಅಮ್ಮ ಮಾತ್ರ ಪಪ್ಪಾ ಬರಲಿ ಬರದೇ ಇರಲಿ. ಊಟ ಮಾಡ್ತಾರೆ ತಿಂಡಿ ತಿಂತಾರೆ. ಪಪ್ಪಾ ಅಮ್ಮನ ಪ್ರೀತಿಯಿಂದ ನೋಡ್ಕೊಳ್ಳೋದಿಲ್ವಾ. ಇಲ್ಲಾ ಅಮ್ಮ ಪಪ್ಪಾ ನಾ ಪ್ರೀತಿಯಿಂದ ನೋಡ್ಕೊಳ್ಳೋದಿಲ್ವಾ ಅಂತ ಕೇಳ್ತಾ ಅಮ್ಮನ ಮುಖ ನೋಡ್ತಾ