ಅಭಿನಯನಾ - 2

  • 207
  • 81

      ರಾತ್ರಿ ಊಟ ಮಾಡದೇ ಹಾಗೇ ಮಲಗಿದ್ದ ಅಭಿ ಗೆ ಅವನ ಮುದ್ದಾದ ಮಗಳು ಅನಾ ಬಂದು ಎಬ್ಬಿಸಿದಾಗ ನಿದ್ದೆಯಿಂದ ಎಚ್ಚರ ಆಯಿತು.  ಅಭಿ ಕಣ್ ಬಿಟ್ಟು ಮಗಳ ಮುದ್ದು ಮುಖ ನೋಡ್ತಾ ಗುಡ್ ಮಾರ್ನಿಂಗ್ ಬಂಗಾರ ಅಂತ ಹೇಳ್ತಾನೆ. ಅನಾ,,,, ಗುಡ್ ಮಾರ್ನಿಂಗ್ ಪಪ್ಪಾ, ಅಂತ ಹೇಳಿ ಕೆನ್ನೆಗೆ ಮುತ್ತಿಟ್ಟು, ತುಸು ಕೋಪದಿಂದ ಪಪ್ಪಾ ರಾತ್ರಿ ನಿನಗೋಸ್ಕರ ಎಷ್ಟು ಕಾದೆ ಗೊತ್ತಾ, ನೀನು ಬರಲೇ ಇಲ್ಲಾ. ನೀನು ಬರ್ತೀಯ ಬರ್ತೀಯ ಅಂತ ನೋಡಿ ನೋಡಿ ಹಾಗೇ ಮಲಗಿ ಬಿಟ್ಟೆ. ಅಭಿ,,, ಸಾರೀ ಬಂಗಾರ ಕೆಲಸ ಜಾಸ್ತಿ ಇತ್ತು ಅದಕ್ಕೆ ಲೇಟ್ ಆಗಿ ಬಿಡ್ತು ಸಾರೀ ಅಂತ ಹೇಳಿ ಮಗಳ ಕೆನ್ನೆಗೆ ಮುತ್ತಿಟ್ಟು, ಇನ್ಮೇಲೆ ಅಷ್ಟು ಲೇಟ್ ಮಾಡೋದಿಲ್ಲ ಸರಿನಾ. ಅನಾ,,, ಥ್ಯಾಂಕ್ಸ್ ಪಪ್ಪಾ ಅಂತ ಹೇಳಿ ಅಪ್ಪಿಕೋಳ್ತಾಳೆ.ಸ್ವಲ್ಪ ಸಮಯ ಮಗಳ ಜೊತೆಗೆ ಆಟವಾಡಿಕೊಂಡು ನಂತರ ಮಗಳನ್ನ ಬೆನ್ನ ಮೇಲೆ ಕೂರಿಸಿಕೊಂಡು ಮೆಟ್ಟಿಲು ಇಳಿದು ಹಾಲ್ ಗೆ ಬರ್ತಾನೇ. ಮಗಳನ್ನ ಕೆಳಗೆ