ಸಾವಿನ ಲಾಕರ್ -ಹನ್ನೊಂದನೇ ಮಹಡಿಯ ರಹಸ್ಯ

  • 108

ವರುಣ್ ಇತ್ತೀಚೆಗೆ ನಗರದ ಹೃದಯ ಭಾಗದಲ್ಲಿರುವ ಒಂದು ಐಷಾರಾಮಿ ಹೈ-ರೈಸ್ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಗೊಂಡಿದ್ದ. 'ದಿ ಸ್ಕೈವೇ' ಎಂಬ ಆ ಕಟ್ಟಡದಲ್ಲಿ ಒಟ್ಟು 15 ಮಹಡಿಗಳು. ವರುಣ್ ವಾಸಿಸುತ್ತಿದ್ದ ಫ್ಲಾಟ್ ಸಂಖ್ಯೆ 1103  ಹನ್ನೊಂದನೇ ಮಹಡಿಯಲ್ಲಿ.ಸಮಯ ರಾತ್ರಿ 10 ಗಂಟೆ. ಹೊರಗೆ ಭಾರಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿತ್ತು. ವಿದ್ಯುತ್ ಇತ್ತು, ಆದರೆ ಅಪಾರ್ಟ್‌ಮೆಂಟ್‌ನ ದೀರ್ಘ ಕಾರಿಡಾರ್‌ಗಳು ವಿಚಿತ್ರವಾದ ನಿಶ್ಯಬ್ದದಲ್ಲಿ ಮುಳುಗಿದ್ದವು. ವರುಣ್ ಕೆಲಸದ ಒತ್ತಡದಿಂದ ಬೇಸತ್ತು ಮನೆಗೆ ಬಂದಿದ್ದ. ಅವನ ರೂಮ್‌ಮೇಟ್ ಒಂದು ವಾರದ ಮಟ್ಟಿಗೆ ಊರಿಗೆ ಹೋಗಿದ್ದರಿಂದ ವರುಣ್ ಒಂಟಿ.ಅವನು ತನ್ನ ಲ್ಯಾಪ್ಟಾಪ್ ಆನ್ ಮಾಡಿ, ಇಯರ್‌ಫೋನ್ಸ್‌ ಹಾಕಿ ಸಂಗೀತ ಕೇಳುತ್ತಿದ್ದಾಗ, ಸಣ್ಣದೊಂದು ಶಬ್ದ ಕೇಳಿಸಿತು. ಅದು ಅವನ ಫ್ಲಾಟ್‌ ಬಾಗಿಲಿನಿಂದ ಬಂದಿತ್ತು. ಟಕ್... ಟಕ್.ವರುಣ್ ಇಯರ್‌ಫೋನ್ಸ್‌ ತೆಗೆದು, ಕಿವಿ ನಿಮಿರುವಂತೆ ಮಾಡಿದ. ಯಾವುದೇ ಶಬ್ದ ಕೇಳಲಿಲ್ಲ. ಇದು ಗಾಳಿಯ ಸದ್ದಾಗಿರಬಹುದು' ಎಂದುಕೊಂಡನು. ಮತ್ತೆ, ಕಬ್ಬಿಣದಂತಹ ವಸ್ತು ಏನೋ ನೆಲದ ಮೇಲೆ ಉರುಳಿದಂತಹ ಶಬ್ದ ಕೇಳಿಸಿತು. ಈ ಬಾರಿ ಸ್ಪಷ್ಟವಾಗಿತ್ತು,