ನಾನು ಸೀತಾ ಗೆ ಅಣ್ಣ ಅಂತ ಗೊತ್ತಾಗಿದ್ದೇ ಗಟ್ಟಿಯಾಗಿ ತಬ್ಬಿಕೊಂಡು ಅಳೋಕೆ ಶುರು ಮಾಡಿದ್ಲು ಸ್ವಲ್ಪ ಹೊತ್ತು ಅಪ್ಪಿಕೊಂಡು ಅಳ್ತಾ ನೇ ಇದ್ದಳು . ನಾನು ಅವಳಿಗೆ ಸಮಾಧಾನ ಮಾಡಿ ಕರ್ಕೊಂಡು ಹೋಗಿ ಸೋಫಾ ಮೇಲೆ ಕೂರಿಸಿ ಕುಡಿಯೋಕೆ ನೀರನ್ನ ಕೊಟ್ಟೆ. ಅವಳು ನೀರನ್ನ ಗಟ ಗಟ ಅಂತ ಕುಡಿದು ನನ್ನ ಕೈ ಇಡ್ಕೊಂಡ್ ಅಣ್ಣ ಬಾ ಈ ವಿಷಯ ನಾ ಮನೇಲಿ ಹೋಗಿ ಅಪ್ಪ ಅಮ್ಮ ತಾತನಿಗೆ ಹೇಳೋಣ ಅಂತ ಎದ್ದು ನಿಂತಳು. ನಾನು ಅವಳ ಕೈ ಇಡಿದು ಈಗಲ್ಲ ಕುತ್ಕೋ ಅಂತ ಹೇಳ್ದೆ. ಸೀತಾ ಅಣ್ಣ ಏನ್ ಹೀಗೆ ಹೇಳ್ತಾ ಇದ್ದಿಯಾ ನೀನು ಅವರ ಮಗ ಅಂತ ಗೊತ್ತಾದ್ರೆ ಎಷ್ಟು ಖುಷಿ ಪಡ್ತಾರೆ ಅಂತ ನಿನಗೆ ಗೊತ್ತಿಲ್ಲ ಅಣ್ಣ ಬಾ ಅಂತ ಕೇಳಿ ಕೊಂಡಳು. ನಾನು ಸೀತಾ ಮಾತಿಗೆ ಅವರು ಎಷ್ಟು ಖುಷಿ ಪಡ್ತಾರೋ ಗೊತ್ತಿಲ್ಲ ಅದ್ರೆ, ನಿಮ್ ಮಾವ, ನಿಮ್ ಚಿಕ್ಕಪ್ಪ ತುಂಬಾ ಖುಷಿ