ಮಹಿ - 43

  • 207

    ನಾನು ತಾತ ಮನೆ ಒಳಗೆ ಬಂದು ಹಾಲ್ ಅಲ್ಲಿ ಕುತ್ಕೊಂಡ್ವಿ. ತಾತ ಬಬಿತ ಅಂತ ಕರೆದ್ರು. ಅಡುಗೆ ಮನೆ ಅಲ್ಲಿ ಇದ್ದಾ ಅಡುಗೆ ಕೆಲಸದವಳು ಬಬಿತ ಬಂದು, ಅವರ ಭಾಷೇಲಿ. ಹೇಳಿ ಸರ್ ಅಂತ ಕೇಳಿದ್ಲು. ತಾತ ಏನಿಲ್ಲಾ ಬಬಿತ ಮಹಿ ಇದ್ದಾನೆ ಅಲ್ವಾ ಅವನಿಗೆ ಹಾಸ್ಟೆಲ್ ಅಲ್ಲಿ ಫುಡ್ ಅಷ್ಟೊಂದು ಸೆಟ್ ಆಗ್ತಾ ಇಲ್ಲಾ ಅಂತೇ ಅವನಿಗೆ ಮಾಡಿಕೊಳ್ಳೋಣ ಅಂದ್ರೆ ಏನೇನ್ ತಗೋಬೇಕೋ ಗೊತ್ತಿಲ್ಲ. ನಿನ್ನ ನಂಬರ್ ಅವನಿಗೆ ಕೊಡು. ಅವನು ಹಾಸ್ಟೆಲ್ ಅಲ್ಲಿ ಅಡುಗೆ ಮಾಡ್ಕೋಬೇಕಾದ್ರೆ ನಿನಗೆ ಕಾಲ್ ಮಾಡಿ ಯಾವ್ ಅಡುಗೆಗೆ ಏನ್ ತಗೋಬೇಕು ಹೇಗೆ ಮಾಡಬೇಕು ಅಂತ ನಿನ್ನ ಹತ್ತಿರ ಕೇಳಿ ತಿಳ್ಕೊಂಡು ಅಡುಗೆ ಮಾಡ್ಕೋತಾನೇ ಅದು ಅಲ್ಲದೆ ನಿನಗೆ ಸೌತ್ ಇಂಡಿಯನ್ ಫುಡ್ ಕೂಡ ಮಾಡೋಕೆ ಬರುತ್ತೆ ಅಲ್ವಾ  ಅವನಿಗೂ ಹೆಲ್ಪ್ ಆಗುತ್ತೆ ಫ್ರೀ ಆಗಿ ಏನು ಹೇಳಿಕೊಡಬೇಡ ದುಡ್ಡು ಕೊಡ್ತಾನೆ ಅಂತ ಹೇಳಿದ್ರು. ಬಬಿತ ಗೆ ದುಡ್ಡು ಕೊಡ್ತೀನಿ ಅಂತ