ಬದುಕೆಂದರೆ ??

  • 57

ಮಬ್ಬುಗತ್ತಲಿನ ಬೆಳಗಿನ ಮುಂಜಾವು, ಗಾಢ ನಿದ್ರೆಯಲ್ಲಿ ಇದ್ದ ಸಿದ್ದಾರ್ಥ್ ಫೋನ್ ರಿಂಗಣಿಸಿತ್ತು. ಮೊದಮೊದಲು ಕರೆ ಸ್ವೀಕರಿಸದವರು, ಮತ್ತೆ ಮತ್ತೆ ಬಿಡದೆ ಎರಡು ಮೂರು ಬಾರಿ ಕರೆ ಬಂದಾಗ ಎದ್ದು ಕುಳಿತು ತನ್ನ ಕನ್ನಡಕ ಏರಿಸಿಕೊಂಡು ಮೊಬೈಲ್ ಸ್ಕ್ರೀನ್ ಕಡೆಗೆ ನೋಡಿದ್ದವರಿಗೆ ತಿಳಿಯಿತು ಅದು ಆಸ್ಪತ್ರೆಯಿಂದ ಬಂದ ಕರೆಯಾಗಿತ್ತು ಎಂದು. ಬೆಳಗಿನ ಸಿಹಿ ನಿದ್ರೆ ಭಂಗವಾಗಿದ್ದ ಕಿರಿಕಿರಿಯಲ್ಲೆ ಕರೆ ಎತ್ತಿದವರ ಧ್ವನಿಯಲ್ಲಿ ಯಾವುದೇ ಕಿರಿಕಿರಿಯನ್ನು ಅತ್ತಲಿನ ವ್ಯಕ್ತಿ ಹುಡುಕಲಾರ..!!! ಅದೇ ಮಾತಿನ ವೈಖರಿ, ಎಲ್ಲರನ್ನು ಸೆಳೆಯುವ ಏರಿಳಿತವಿಲ್ಲದ ಧ್ವನಿ.“ಹಲೋ” ಎಂದು ಹೇಳಿದವರು ಅತ್ತಲಿನ ವ್ಯಕ್ತಿಯ ಮುಂದಿನ ಮಾತಿಗಾಗಿ ಕಾದರು.“ಹಲೋ ಡಾಕ್ಟರ್ ಸಿದ್ದಾರ್ಥ್, ಡಾಕ್ಟರ್ ಜಯದ್ರತ್ ನಿಮ್ಮನ್ನು ಆದಷ್ಟು ತುರ್ತಾಗಿ ಆಸ್ಪತ್ರೆಗೆ ಬರಲು ಹೇಳಿದ್ದಾರೆ.!!” ಎಂದು ನರ್ಸ್ ಹೇಳಿದಳು.ಈ ಸಮಯದಲ್ಲಿ ಯಾಕೆ ಬರಬೇಕು?? ಇದು ನನ್ನ ಕೆಲಸದ ಅವಧಿಯಲ್ಲ ಎಂದು ಹೇಳಬೇಕು ಎನಿಸಿತು. ಆದರೆ ವೈದ್ಯರಿಗೆ ಹಾಗೆ ಸೈನಿಕರಿಗೆ ಕರ್ತವ್ಯ ಯಾವುದೇ ಕ್ಷಣದಲ್ಲಿ ಬೇಕಾದರೂ ಕರೆಯಬಹುದು, ಅದಕ್ಕಾಗಿ ಎಲ್ಲವನ್ನು ಬದಿಗಿಟ್ಟು ತಯಾರಿರಬೇಕು ಎಂದು ಚಿಕ್ಕ