ಅಂತ್ಯವಿಲ್ಲದ ಪ್ರೀತಿ

  • 249
  • 75

ಗುಯ್ ಎನ್ನುತ್ತಿದ್ದ ಕತ್ತಲೆಯ ರಾತ್ರಿ, ಬೆಡ್ ಮೇಲೆ ಆರಾಮಾಗಿ ಮಲಗಿ ಆಳವಾದ ನಿದ್ರೆಯಲ್ಲಿದ್ದ ರಂಜಿತ್ ಹುಬ್ಬುಗಳು ಒಮ್ಮೆಲೇ ಗಂಟಿಕ್ಕಿಕೊಂಡವು. ಮುಚ್ಚಿದ್ದ ಕಣ್ಣುಗಳ ಒಳಗಿನ ಕಣ್ಣುಗುಡ್ಡೆಗಳು ಅತ್ತಿತ್ತಾ  ಓಡಾಡಲು ಶುರುವಾಗಿ ಏನನ್ನೋ ಕನವರಿಸುತ್ತ ಬೆಡ್ ಮೇಲೆ ಕಣ್ಣು ಬಿಡದೆ ಒದ್ದಾಡಿದ. ಮುಖದ ಮೇಲೆಲ್ಲಾ ಬೆವರಿನ ಹನಿಗಳು ಮೂಡುತ್ತಿದ್ದವು. ಒಂದಷ್ಟು ಕ್ಷಣದಲ್ಲಿ " ಇಲ್ಲ " ಎಂದು ಚೀರಿ ಎದ್ದು ಕುಳಿತಿದ್ದ. ಕಣ್ಣು ಬಿಟ್ಟವನು ತಲೆ ಮೇಲೆ ಎತ್ತಿ ನೋಡಿದ. ಸುತ್ತಲೂ ಒಮ್ಮೆ ನೋಡಿದವನಿಗೆ ಅದೊಂದು ಕನಸು ಎನ್ನುವುದು ಅರಿವಾಗಿ ಟೇಬಲ್ ಮೇಲೆ ಇರಿಸಿದ್ದ ಗ್ಲಾಸ್ ಅಲ್ಲಿನ ನೀರು ಕುಡಿದ. ಇಂತಹ ಭಯಾನಕ ಕನಸು, ಹೆಚ್ಚು ಕಡಿಮೆ ಪ್ರತಿದಿನ ಬೀಳುವ ಕನಸು ಅದು. ಆದರೂ ಪ್ರತಿಬಾರಿ ಒಂದೇ ತೆರನಾದ ತೀವ್ರತೆ ತರುತ್ತಿತ್ತು.ಅವನ ಕಿರುಚುವಿಕೆಗೆ ಪಕ್ಕದ ರೂಮಿನಲ್ಲಿದ್ದ ಸೋಹನ್ ಓಡಿ ಬಂದಿದ್ದ. " ಮತ್ತೆ ಕನಸು ಬಿತ್ತಾ ?? " ಕೇಳಿದ. ರಂಜಿತ್ ತಲೆ ಆಡಿಸಿದ.ಸೋಹನ್ " ನೀನು ಮಾಡೋ ಕೆಲಸದಲ್ಲಿ ಹೆಚ್ಚು ಧೈರ್ಯ ಬೇಕು