ಮಹಿ - 26

    ನಾವು ಮಾಡೋ ಕೆಲಸದಲ್ಲಿ  ಒಳ್ಳೆ ಉದ್ದೇಶ ಇದ್ದರೆ  ಸ್ವಲ್ಪ ಕಷ್ಟ ಆದ್ರು ಕೊನೆಗೆ ಒಳ್ಳೇದೇ ಆಗುತ್ತೆ ಅನ್ನೋ ಮಾತಿದೆ ಹಾಗೇ ತಾತ ಫ್ಯಾಕ್ಟರಿ ನಾ ಶುರು ಮಾಡಿದೆ ಒಳ್ಳೆ ಉದ್ದೇಶದಿಂದ  ಹಾಗೇ ನಾನು ಕೂಡ ದುಡ್ಡಿನ ಆಸೆಗೆ ಬೀಳದೆ  ನನ್ನ ನಂಬಿ ಬಂದವರಿಗೆ ಒಳ್ಳೆಯದು ಆಗಲಿ ಅಂತ ಅನ್ಕೊಂಡು ಈ ನಿರ್ಧಾರ ತಗೊಂಡೆ. ತಾತ ನಾ ಅನುಭವ ನನಗೆ ತುಂಬಾ ಸಹಾಯ ಮಾಡಿತು, ಪ್ರತಿಯೊಂದು ಹೆಜ್ಜೆ ನಾ ಯೋಚ್ನೆ ಮಾಡಿ ಇಡೋಕೆ ಶುರು ಮಾಡಿದೆ. ನೀಲಾ ರೋಹಿಣಿ  ಇಬ್ಬರು ಅವರ ಬುದ್ದಿವಂತಿಕೆ ನ ಬಳಸಿಲೋಳ್ಳೋಕೆ ಶುರು ಮಾಡಿದ್ರು, ಒಳ್ಳೆ ಒಳ್ಳೆ ಡಿಸೈನ್ ಮಾಡೋಕೆ ಶುರು ಮಾಡಿದ್ರು ಈಗಿನ ಟ್ರೆಂಡ್ ಗೆ ತಕ್ಕ ಹಾಗೇ. ಮೊದಲೇ ಪ್ಲಾನ್ ಮಾಡಿದ ಹಾಗೇ ಕಾಲೇಜ್ ಗಳಲ್ಲಿ ಫ್ಯಾಷನ್ ಷೋ ನ ಶುರು ಮಾಡಿದ್ವಿ. ಸೋಶಿಯಲ್ ಮೀಡಿಯಾ ದಲ್ಲೂ ಒಳ್ಳೆ ಅಭಿಪ್ರಾಯ ಬರೋಕೆ ಶುರುವಾಯ್ತು. ಡಿಮ್ಯಾಂಡ್ ಗೆ ತಕ್ಕ ಹಾಗೇ ಪ್ರೊಡಕ್ಷನ್ ನಾ ಶುರು