ಮಹಿ - 23

  • 27

   ಇಬ್ರು ದಾರಿ ಉದ್ದಕ್ಕೂ ಮಾತಾಡ್ಕೊಂಡು  ಮನೆ ಹತ್ತಿರ ಬಂದ್ವಿ. ಅಷ್ಟೋತ್ತಿಗೆ ರಾತ್ರಿ 8 ಗಂಟೆ ಆಗಿತ್ತು. ನಾವು ಬಂದಿದ್ದನ್ನ ನೋಡಿ ಗಾರ್ಡನ್ ಅಲ್ಲಿ ಕೂತಿದ್ದ ಅಷ್ಟು ಜನ ಎದ್ದು ನಮ್ಮ ಕಡೆಗೆ ನೋಡ್ತಾ ನಿಂತರು. ನಾನು ನೀಲಾ ಕಾರ್ ಇಳಿದು ಲಗೇಜ್ ತಗೊಂಡು, ಅವರ ಹತ್ತಿರ ಬಂದ್ವಿ. ತಾತ ಮಾತಾಡ್ತಾ ಮಹಿ ಏನಾಯ್ತು ನಾಳೆ 2 ದಿನ ಆಗುತ್ತೆ ಅಂತ ಹೇಳಿ ಇಷ್ಟು ಬೇಗ ಬಂದ್ರಿ ಅಂತ ಕೇಳಿದ್ರು. ನೀಲಾ ತಾತ ಹೇಳ್ತಿವಿ ಬನ್ನಿ ಮನೆ ಒಳಗೆ ಹೋಗೋಣ ಅಂತ ಹೇಳಿದ್ಲು. ತಾತ, ಸರಿ ಬನ್ನಿ ಅಂತ ಹೇಳಿ ಎಲ್ಲರನ್ನು ಕರ್ಕೊಂಡು ಮನೆ ಒಳಗೆ ಬಂದ್ರು. ಅಡುಗೆ ಮನೇಲಿ ಇದ್ದಾ ಅಜ್ಜಿ ನೀಲಾ ಅವರ್ ಅಮ್ಮ ಅತ್ತೆ ನಾವು ಬಂದಿದ್ದನ್ನ ನೋಡಿ ಅಡುಗೆ ಮನೆಯಿಂದ ಹೊರಗೆ ಬರ್ತಾ. ಅಜ್ಜಿ ನೀಲಾ ಏನಾಯ್ತು 2 ದಿನ ಆಗುತ್ತೆ ಬರೋಕೆ ಅಂತ ಹೇಳಿ ಹೋದ್ರಿ ಇಷ್ಟು ಬೇಗ ಬಂದ್ರಿ ಹೋದ ಕೆಲಸ ಏನಾಯ್ತು