ಮರು ಹುಟ್ಟು 1

  • 135

ಕತ್ತಲೆಯ ಕೋಣೆ ಮತ್ತು ನೆನಪುಗಳ ಸರಣಿ (ಇಂಟೀರಿಯರ್ - ರಾತ್ರಿ)ಕತ್ತಲು ಆವರಿಸಿದ ಒಂದು ಚಿಕ್ಕ ಕೋಣೆ. ಮಧ್ಯಾಹ್ನವಾದರೂ ಅನಿಕಾ (29 ವರ್ಷ) ಬೆಡ್ ಶೀಟ್‌ನ್ನು ತಲೆ ಮೇಲೆ ಎಳೆದುಕೊಂಡು ಮಲಗಿರುತ್ತಾಳೆ. ಹೊರಗೆ ಜಗತ್ತು ಸಾಗುತ್ತಿರುವುದು ಅವಳಿಗೆ ಗೊತ್ತೇ ಇಲ್ಲ. ನಿಶಬ್ದ.(ಫ್ಲ್ಯಾಶ್‌ಬ್ಯಾಕ್  ಶಾಲಾ ದಿನಗಳು)ಅನಿಕಾ, ಬುದ್ಧಿವಂತ ವಿದ್ಯಾರ್ಥಿನಿ. ಶಾಲಾ ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದರೂ, ಕ್ರೀಡಾ ಕೋಟಾದಡಿಯಲ್ಲಿ  ಸಿಗಬೇಕಾದ ಸೀಟ್ ತನ್ನ ಸ್ನೇಹಿತೆಗೆ ಸಿಕ್ಕಿ, ಅನಿಕಾ ಕೇವಲ ಒಂದು ಅಂಕದ ವ್ಯತ್ಯಾಸದಲ್ಲಿ ದೊಡ್ಡ ಕಾಲೇಜಿನ ಅವಕಾಶ ಕಳೆದುಕೊಳ್ಳುವುದು.ಅನಿಕಾ (ಒಳ ಧ್ವನಿ): ಸಣ್ಣ ಅಂತರ... ಕೇವಲ ಒಂದು ಅಂಕ. ಪ್ರತಿ ಬಾರಿ, ಪ್ರತಿ ಹಂತದಲ್ಲಿ ನನಗಾದದ್ದು ಇದೇ. ಇನ್ನೇನು ತಲುಪಿದೆ ಎನ್ನುವಷ್ಟರಲ್ಲಿ ಬಾಗಿಲು ಮುಚ್ಚಿ ಹೋಗುತ್ತದೆ.(ಫ್ಲ್ಯಾಶ್‌ಬ್ಯಾಕ್  ಕಾಲೇಜು ದಿನಗಳು)ಅನಿಕಾ ಕಷ್ಟಪಟ್ಟು ಓದಿ ಸ್ಕಾಲರ್‌ಶಿಪ್ ಪರೀಕ್ಷೆಗೆ ಸಿದ್ಧಳಾಗುತ್ತಾಳೆ. ಆದರೆ ಪರೀಕ್ಷೆಯ ದಿನ ತೀವ್ರ ಜ್ವರದಿಂದ ಬಳಲುತ್ತಾಳೆ. ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ. ಸ್ಕಾಲರ್‌ಶಿಪ್ ಅವಕಾಶ ಶಾಶ್ವತವಾಗಿ ಕೈ ತಪ್ಪುತ್ತದೆ.ಅನಿಕಾ (ಒಳ ಧ್ವನಿ): ದೇವರೇ, ನನ್ನ ಪ್ರಯತ್ನದಲ್ಲಿ ಕೊರತೆ ಇರಲಿಲ್ಲ.