ಮಾಯಾಂಗನೆ - 2

  • 654
  • 255

ನೋಡಿ ಸರ್ ಅವರು ಅಂದರೆ ಅದೆ ಆ ಫೋಟೋದಲ್ಲಿ ಇರುವುದು ನನ್ನ ಗೆಳತಿ ಹೊರತು  ಹೆಂಡತಿಯಲ್ಲಎಂದು ಹೇಳಿದ ಅರುಣ್ ಕುಮಾರ್ ಅಲ್ಲಿಂದ ಬೇಗ - ಬೇಗ ಹೋಗಿ ಬಸ್ಸ್ ಹತ್ತಿ ಸೀಟಿನಲ್ಲಿ ಕಳಿತುಕೊಂಡನು  ...... ಈ ಅರುಣ್ ಯಾಕೆ ವಿಚಿತ್ರವಾಗಿ ನಡೆದು ಕೊಳ್ಳುತ್ತಾ ಇದ್ದಾನೆ ... ಇವನು ಇರುವುದೇ ಈಗೆಯಾ ಅಥವಾ ನನ್ನ ಪೊಲೀಸ್ ಮೈಂಡ್ ಗೆ ಇವನು ವಿಚಿತ್ರ ಅಂತ ಕಾಣಿಸುತ್ತಾ ಇದೆಯಾ .... ಆದರೆ ಇವನಲ್ಲಿ ಏನೋ ಒಂದು ರಹಸ್ಯ ಇದೆ  ತಿಳಿದು ಕೊಳ್ಳಬೇಕು ...  ಆದರೆ ಇವನ ಮನದ ವಿಷಯವನ್ನು ನಾನು ಹೇಗೆ ತಿಳಿದು ಕೊಳ್ಳುವುದು ... ಇವನ ಮನಸಿನ ಮಾತುಗಳನ್ನು ನಾನು ಹೇಗಾದರೂ ಹೊರಗೆ ತರಿಸ ಬೇಕು ...ಎಂದು ಅನುಜ್ ಸೂದ್ ಮನದಲ್ಲಿಯೇ ನೆನೆದ.ಅರುಣ್ ಕುಮಾರ್ ವರ್ತನೆ ಅನುಜ್ ಗೆ ಸ್ವಲ್ಪ ವಿಚಿತ್ರ ಎಂದು ಅನಿಸಿದರೂ   ... ಆದನ್ನು ಏನೂ ತೋರ್ಪಡಿಸದೆ  ಅನುಜ್ ಅವನ ಸೀಟಿನಲ್ಲಿ ಹೋಗಿ ಕುಳಿತುಕೊಂಡು ಬಿಡುತ್ತಾನೆ ...  ಅರುಣ್ ಸ್ವಲ್ಪ ಹೊತ್ತು ಸುಮ್ಮನೆ ಇದ್ದು  ತನ್ನನ್ನು ತಾನು ಸುಧಾರಿಸಿ ಕೊಂಡನು ನಂತರ