ನೋ ಸ್ಮೋಕಿಂಗ್ - 1

  • 72

​ನಮ್ಮ ಕಥೆ ನಡೆಯುವುದು ಶೂನ್ಯ ಎಂಬ ನಗರದಲ್ಲಿ. ಇದು ಸಾಮಾನ್ಯ ನಗರಗಳಂತೆ ಸುಂದರ, ಹಸಿರು ಮತ್ತು ಪ್ರಶಾಂತವಾಗಿ ಕಾಣುತ್ತದೆ. ಆದರೆ, ಈ ನಗರದ ವಿಶೇಷತೆಯೆಂದರೆ ಇಲ್ಲಿ ಧೂಮಪಾನ ಸಂಪೂರ್ಣವಾಗಿ ನಿಷಿದ್ಧ. ಸರ್ಕಾರದ ಕಟ್ಟುನಿಟ್ಟಿನ ಕಾನೂನು ಮತ್ತು ನಾಗರಿಕರ ಸಹಕಾರದಿಂದ ಇದು ಸಾಧ್ಯವಾಗಿದೆ. ಇಲ್ಲಿ ಎಲ್ಲರೂ ಆರೋಗ್ಯಕರ ಜೀವನವನ್ನು ಪ್ರೀತಿಸುತ್ತಾರೆ, ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ.ನಗರದ ಹೃದಯ ಭಾಗದಲ್ಲಿರುವ ಒಂದು ಸುಂದರವಾದ ಉದ್ಯಾನವನ. ಸಮಯ ಸಂಜೆ 5:30. 45 ವರ್ಷದ ಸುಧೀರ್, ನಗರದ ಬಹು ದೊಡ್ಡ ವಾಣಿಜ್ಯೋದ್ಯಮಿ. ಇತ್ತೀಚೆಗೆ ಅವರ ಸ್ನೇಹಿತರ ವಲಯದಲ್ಲಿ, ಸುಧೀರ್ ಯಾಕೋ ಸದಾಕಾಲ ಬೇಜಾರಾಗಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಸುಧೀರ್ ತಾನು ಕೂತಿದ್ದ ಬೆಂಚ್ ಮೇಲೆ, ಕೈಯಲ್ಲಿ ಹೊಸದಾಗಿ ಖರೀದಿಸಿದ ಫೋನ್ ಹಿಡಿದು ಕುಳಿತಿದ್ದಾರೆ. ಆದರೆ ಅವರ ಕಣ್ಣುಗಳು ಫೋನ್‌ನಲ್ಲೇ ಇಲ್ಲ, ಬದಲಾಗಿ ಅವರ ಆಳದ ಬೇಜಾರನ್ನು ತೋರಿಸುವಂತೆ ದೂರದ ದಿಗಂತವನ್ನು ನೋಡುತ್ತಿವೆ.ಅದೇ ಸಮಯದಲ್ಲಿ, 25 ವರ್ಷದ ಯುವಕ ರಾಘವ್, ಸುಧೀರ್ ಅವರ ಕಂಪನಿಯಲ್ಲಿ ಕೆಲಸ ಮಾಡುವ ಒಬ್ಬ ಸಣ್ಣ