ಮಹಿ

  • 294
  • 102

ಬೆಳಿಗ್ಗೆ 7 ಗಂಟೆ ಸಮಯ ಅಲಾರಾಂ ಜೋರಾಗಿ ಸೌಂಡ್ ಮಾಡ್ತಾ ಇದ್ರೂ ಕೇಳಿಸಿ ಕೇಳಿಸದ ಹಾಗೆ ಆರಾಮಾಗಿ ನಿದ್ದೆ ಮಾಡ್ತಾ ಇದ್ದ .. ಅಲಾರಾಂ ಸೌಂಡ್ 4 5 ಬಾರಿ ಬಡ್ಕೊಂಡು ಕೊನೆಗೆ ಸೈಲೆಂಟ್ ಆಗಿ ಬಿಡ್ತು..  ಅಡುಗೆ ಮನೇಲಿ ತಿಂಡಿ ಮಾಡ್ತಾ ಇದ್ದಾ ಒಬ್ಬ ಮಹಿಳೆ.  ಗಡಿಯಾರ ನಾ ನೋಡಿ. ಕೋಪ ಮಾಡಿಕೊಂಡು ಅಡುಗೆ ಮನೆ ಬಿಟ್ಟು.. ರೂಮ್ ಕಡೆಗೆ ಹೋಗ್ತಾರೆ. ಬೆಡ್ ಮೇಲೆ ಇನ್ನು ಮಲಗಿರೋದನ್ನ ನೋಡಿ  ಲೋ ಇನ್ನು ಮಲಗಿದ್ದೀಯ ಎದ್ದೇಳು ಆಫೀಸ್ ಗೆ ಟೈಮ್ ಆಗ್ತಾ ಇದೆ ಅಂತ ಮಂಚದ ಮೇಲೆ ಬೆಡ್ಶೀಟ್ಮ ನಾ ಫುಲ್ ಹಾಕಿಕೊಂಡು ಮಲಗಿರೋ ಮಗನನ್ನ ಎಬ್ಬಿಸ್ತಾರೆ..  ಎರಡು ಮೂರು ಬಾರಿ ಕರೆದ್ರು ಏನು ರಿಯಾಕ್ಟ್ ಮಾಡಲಿಲ್ಲ.  ಕೊನೆಗೆ ಕೋಪ ಬಂದು.. ಮುಖದ ಮೇಲೆ ಇರೋ ಬೆಡ್ಶೀಟ್ ನಾ ತೆಗಿತಾರೆ.. ಅಮ್ಮ ಇನ್ನು ಸ್ವಲ್ಪ ಹೊತ್ತು ಮಲಗ್ತೀನಿ.. ಏನು ಇನ್ನು ಸ್ವಲ್ಪ ಹೊತ್ತು ಮಲಗ್ತೀಯ ಆಫೀಸ್ ಏನು ನಿಮ್ ತಾತ ನದ್ದ ಈಗ್ಲೇ 8 ಗಂಟೆ