ಹುಚ್ಚರ ಸಂತೆ

  • 309
  • 102

​ಊರಿನಿಂದ ಸ್ವಲ್ಪ ದೂರದಲ್ಲಿದ್ದ ನಾಯಕನ ಸಿದ್ಧ ಪರ್ವತದ ಕೆಳಗಿರುವ, ಹಳೆ ಮನೆಗಳಿದ್ದ ಸಣ್ಣ ಬೀದಿಯೊಂದರಲ್ಲಿದ್ದ ಚಿಕ್ಕ ಗಣೇಶ ದೇವಸ್ಥಾನದ ಎದುರು ದೊಡ್ಡ ಆಲದ ಮರವಿತ್ತು. ಆ ಮರದ ದೊಡ್ಡ ಕೊಂಬೆಯೊಂದರ ಮೇಲೆ ಒಬ್ಬ ವಿಕಾರ ರೂಪಿಯಾದ ಮನುಷ್ಯ ಕುಳಿತುಕೊಂಡಿದ್ದ. ಆತ, ಯಾರು ಇಲ್ಲಿ ಹುಚ್ಚರು? ಎಂದು ಗಟ್ಟಿಯಾಗಿ ಕೂಗುತ್ತಾ ಜನರತ್ತ ಕೈಬೀಸಿ ಕರೆಯುತ್ತಿದ್ದ. ನೂರೆಂಟು ಚಿಂದಿ ಬಟ್ಟೆಗಳನ್ನು ಸುತ್ತಿಕೊಂಡ ಆತನ ತಲೆಯ ಮೇಲಿದ್ದ ವಿಕಾರವಾದ ಕೇಶರಾಶಿಯ ಮಧ್ಯದಲ್ಲಿ ಆಲದ ಬೀಜಗಳೂ, ಒಣಗಿದ ಎಲೆಗಳೂ ಇತ್ತು. ಅಲ್ಲಿದ್ದ ಜನರತ್ತ ದಿಟ್ಟಿಸಿ ನೋಡುತ್ತಿದ್ದ ಆತನ ಕಣ್ಣುಗಳಲ್ಲಿ ರಕ್ತದ ಕಲೆಗಳಿತ್ತು. ಅವನ ಕೂಗು ದೆವ್ವದ ಕೂಗಿನಂತಿದ್ದ ಕಾರಣ, ಅಲ್ಲಿ ಯಾರೂ ಅವನ ಬಳಿ ಹೋಗಲಿಲ್ಲ. ಆತನ ಮಾತನ್ನು ಕೇಳಿ, ಅಲ್ಲಿ ಸೇರಿದ್ದ ಜನರಲ್ಲಿ ಒಬ್ಬರಾದ, ಕಿರಿದಾದ ಮೀಸೆ ಬಿಟ್ಟಿದ್ದ, ಕೊಂಚ ಬಕ್ಕತಲೆಯ ಮುದಿಯೊಬ್ಬ, ಅವನೊಬ್ಬ ಹುಚ್ಚ, ನೀವೇಕೆ ಅವನ ಬಳಿ ಹೋಗಿ ಅವನ ಹುಚ್ಚುತನಕ್ಕೆ ಹುಚ್ಚರಾಗುವಿರಿ? ಎಂದು ಅಸಹನೆಯಿಂದ ಗದರಿದ. ಅಲ್ಲಿದ್ದ ಜನ ಗುಸುಗುಸು ಮಾತನಾಡಿಕೊಳ್ಳುತ್ತಾ