ಅಧ್ಯಾಯ 15 : "ಅವಿಭಾಜ್ಯದ ಹೃದಯಗಳು, ವಿದಾಯದ ಹೊತ್ತಿನಲ್ಲಿ"ಮನೆಯೆಲ್ಲಾ ಒಂದು ವಿಚಿತ್ರ ವಾದ ವಾತಾವರಣ ಹರಡಿತ್ತು ಶಶಿಧರ್ ಹೇಳಿದ ನಿರ್ಧಾರವು ಎಲ್ಲರ ಮನಸ್ಸಿಗೆ ದೊಡ್ಡ ಆಘಾತ ನೀಡಿತ್ತು ಎದೆ ಬಡಿತ ಹೊತ್ತ ಲಕ್ಕಿ ಕೋಪದಿಂದ ಶಶಿಧರ್ ಎದುರು ನಿಂತು" ಹೇ! ಏನೋ ಹೇಳ್ತಿದೀಯಾ ಶಶಿ...ಇಲ್ಲ ಕಂಡಿತಾ ನಾನಂತು ಇದಕ್ಕೆ ಒಪ್ಗೊಳೋದಿಲ್ಲ..ಇವರಿನ್ನು ಪುಟ್ಟ ಮಕ್ಕಳು ಪಾಪ ಅವಕ್ಕೆ ಇನ್ನು ಏನು ಗೊತ್ತಾಗಲ್ಲ ಅದರಲ್ಲೂ ಬೇರೆ ದೇಶಕ್ಕೆ ಕಳಿಸೋಕೆ ಒಪ್ಪಲ್ಲ" ... ಅಜ್ಜಿ ತನ್ನ ಭಾರವಾದ ಹೆಜ್ಜೆಗಳನ್ನು ಜೆಕೆ ನತ್ತ ಇಟ್ಟು ಅವನ ಹತ್ತಿರ ಬಂದಳು, ಮೊಮ್ಮಗನೆ ಈ ಅಜ್ಜಿ ನಾ ಬಿಟ್ಟು ನೀನು ಹೇಗೋ ಹೋಗ್ತಿಯಾ ಅವಳ ಕಣ್ಣೀರಿನ ಹೊಳೆ ಪ್ರೀತಿ ಮಿಶ್ರಿತ ಆ ಭಾವನೆ ಎಲ್ಲವನ್ನೂ ತೋರಿಸುತ್ತಿತ್ತು ... ಅಜ್ಜಿಯ ಕಣ್ಣಂಚಲ್ಲಿ ಕಣ್ಣೀರನ್ನು ನೋಡಿ ಜೆಕೆ ಹೃದಯಕ್ಕೆ ಕೈ ಹಾಕಿ ಕಿವುಚಿದಂತಾಗುತ್ತದೆ..."ಅವಳು ಮೊಮ್ಮಗನನ್ನು ಬಲವಾಗಿ ಹಿಡಿದು ಹೃದಯದ ನೋವನ್ನು ಹೊರಹಾಕಿದಂತೆ ಗಟ್ಟಿಯಾಗಿ ತಬ್ಬಿಕೊಂಡಳು ...ಹಾಗೆ ಸೂರ್ಯನೆಡೆಗೆ ನೋಡುತ್ತಾ ಸೂರ್ಯ.. ಏನೋ ನೀನು ನಮ್ಮನ್ನೆಲ್ಲ ಬಿಟ್ಟು