ನಳ ದಮಯಂತಿ - 1

  • 252
  • 105

ಕಥೆ : ನಳ ದಮಯಂತಿ    ===============                                    ಭಾಗ - 1ನಿಷಧ ದೇಶದ ರಾಜಧಾನಿ ನಿಷಧ ನಗರ. ಈ ನಗರಿ ಬಹಳ ಸ್ವಚ್ಛ ಮತ್ತು ನಿರ್ಮಲ. ನಗರವು ಅಗಲವಾದ ರಸ್ತೆಗಳನ್ನು, ಹಲವು ಬಣ್ಣದ ವಿಶೇಷ ಮನಮೋಹಕ ಹೂಗಳ, ಹಾಗೂ ತರಹೇವಾರಿ ಹಣ್ಣುಗಳ ಮರಗಳನ್ನು ಹೊಂದಿದ್ದ ಉದ್ಯಾನವನಗಳನ್ನು, ರಸ್ತೆ ದೀಪಗಳನ್ನು ಹೊಂದಿದ್ದು ಸುವ್ಯವಸ್ಥಿತವಾಗಿತ್ತು. ಎತ್ತ ನೋಡಿದರೂ ಊರಿನ ತುಂಬಾ ಎತ್ತರ ಗೋಪುರದ ಸುಂದರ ದೇವಾಲಯಗಳು. ಇದನ್ನು ಆಳ್ವಿಕೆ ಮಾಡುತಿದ್ದವನು ಅನೇಕ ರಾಜರುಗಳ ರಾಜ ನಳ ಚಕ್ರವರ್ತಿ. ಈತನ ತಂದೆ ಚಂದ್ರವಂಶದ ಪ್ರಸಿದ್ದ ಆಡಳಿತಗಾರ ವೀರಸೇನ.         ಈ ದೇಶ ಎಷ್ಟು ಸುಂದರವೋ ಇದನ್ನು ಆಳುತ್ತಿದ್ದ ನಳನದು ಕೂಡ ಸ್ವರ್ಗದ ಅಪ್ಸರೆಯಾರನ್ನೂ ಆಕರ್ಷಿಸುವ ಸೌಂದರ್ಯ. ಕೇವಲ ದೇಹ ಸೌಂದರ್ಯ ಮಾತ್ರವಲ್ಲ ಮನದ ಸೌಂದರ್ಯದಲ್ಲೂ ಸಿರಿವಂತ. ಪರಮ ದಯಾಳು, ಸೌಮ್ಯ, ಸದ್ಗುಣಿ.