ನಮಾಮಿ ಪುರದ ಶ್ರೇಯಾ (ಯಶಸ್ವಿ ಮಹಿಳೆಯ ನೂರೆಂಟು ನೆನಪುಗಳು)ಲೇಖಕ- ವಾಮನಾ ಚಾರ್ಯ ಶ್ರೇಯಾ ಪಾಟೀಲ್, ನಮಾಮಿಪುರದ ಸದಾನಂದ್ ಕಾಲೇಜ್ ಪ್ರಾಂಶುಪಾಲರೆಂದುನಿವೃತ್ತಿ ಆದ ದಿನ ತಡರಾತ್ರಿ ವರೆಗೆ ಅವರಿಗೆ ನಿದ್ರೆ ಬರದೇ ಹಿಂದಿನ ನೆನಪುಗಳು ಸ್ಮೃತಿ ಪಟಲದ ಮೇಲೆ ಬಂದವು.ಇಪ್ಪತ್ತೃದನೆ ವರ್ಷದ ಹುಟ್ಟು ಹಬ್ಬ ಆಚರಿಸಿದ ದಿವಸ ಅಂದೇ ಅಭಿಷೇಕ್ ನೊಡನೆ ಮದುವೆ ನಿಶ್ಚಿತಾರ್ಥ. ವಿಶೇಷ ಬೆಳದಿಂಗಳು ಭೋಜನದ ವ್ಯವಸ್ಥೆ ಹಾಗೂ ಎಲ್ಲಾ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಿದಳು ತಾಯಿ ಮಂಗಳಾ.ಮುಂದೆ ಮೂರು ತಿಂಗಳಾದರೂ ಶ್ರೇಯಾ ಹಾಗೂ ಅಭಿಷೇಕ್ ನಡುವೆ ಫೋನ್ ಸಂಭಾಷಣೆ ಆಗಲಿ, ಭೇಟಿ ಆಗುವದಾಗಲಿ ಆಗಲಿಲ್ಲ. ಈ ಮಧ್ಯ ಎರಡೂ ಕುಟುಂಬಗಳ ಮಧ್ಯ ಆಗಿರು