ಹರ್ಷನ ಕೀರ್ತಿಗೆ ವರ್ಷಳ ಸ್ಪೂರ್ತಿ

  • 6.1k
  • 2.3k

ಹರ್ಷನ ಕೀರ್ತಿಗೆ ವರ್ಷಳ ಸ್ಪೂರ್ತಿ(ಆದರ್ಶ ದಂಪತಿಗಳ ಕಥೆ)      ಲೇಖಕ - ವಾಮನಾಚಾರ್ಯ) ರಾಘವ್ ಪೂರ್ ನಗರದಲ್ಲಿ ಸೋಮ ವಾರ ಬೆಳಗಿನ ಒಂಭತ್ತು ಗಂಟೆ ಸಮಯ. ಅಂದು ಹವಾಮಾನ ಆಹ್ಲಾದಕರ ವಾಗಿತ್ತು. ಹರ್ಷ ಹಾಗು ವರ್ಷ ದಂಪತಿ ಮದುವೆ ಆದ ಆರು ತಿಂಗಳಾದ ಮೇಲೆ ಆಂಜನೇಯ ಬಡಾವಣೆಯ ತಮ್ಮ ನೂತನ  ‘ಗೃಹ ಲಕ್ಷ್ಮಿ’ ಮನೆಯಲ್ಲಿ ವಾಸ. ಆಗಲೇ ತರಕಾರಿ ಮಾರುವ ಭದ್ರಪ್ಪ, ಹಾಲು ಮಾರುವ ನಿಂಗಮ್ಮ ಹಾಗು ದಿನಪತ್ರಿಕೆ ವಿತರಿಸುವ ಕೇಶವ್ ಬಂದು ಹೋಗಿದ್ದರು.   ಟ್ರಿನ್ ಟ್ರಿನ್ ಎಂದು ಕಾಲಿಂಗ್ ಬೆಲ್ ಶಬ್ದ.“ಯಾರಪ್ಪ ಬೆಲ್ ಮಾಡುವರು?” ಎಂದು  ವರ್ಷ ತನ್ನ ಪತಿಗೆ ಕೇಳಿದಳು.“ಸ್ವಲ್ಪ ಇರು,” ಎಂದು ಹೇಳಿ ಬಾಗಿಲು ತೆಗೆದ.ಅವರ ಮನೆಗೆ ಆಕಸ್ಮಿಕವಾಗಿ ರಾಘವಪುರ್ ನಗರದ ಪ್ರತಿಷ್ಟಿತ ವ್ಯಕ್ತಿ ಮಾಜಿ ಶಾಸಕ ಶಂಭು ನಾಥ್ ಕಲ್ಕಾಪುರ ಅವರ ಆಗಮನ. ಅವರು ಮನೆ ಒಳಗೆ ಬರದೇ,“ಹರ್ಷ ವಕೀಲರೇ, ಕೋರ್ಟ್ ನಲ್ಲಿ ಇಂದಿನ ಕೇಸ್ ಕೈಬಿಡಿ. ಇಲ್ಲದಿದ್ದರೆ ಅಪಾಯ ಎದುರಿಸಿ,”ಎಂದು ಹೊರಗಿನಿಂದಲೇ ಧಮಕಿ ಹಾಕಿ ಹೋದರು. ಇದನ್ನು ಕೇಳಿದ ವರ್ಷಗೆ ಕೋಪ