ಉದ್ವೇಗದಲ್ಲೂ ಹಾಸ್ಯ

  • 12.7k
  • 4.3k

ಉದ್ವೇಗದಲ್ಲೂ ಹಾಸ್ಯ (ಚಿಕ್ಕ ಹಾಸ್ಯ ಕಥೆ)ಲೇಖಕ ವಾಮನ್ ಆಚಾರ್ಯ ಗಿಡ ಮರಗಳು ಬೆಟ್ಟ ಗಳ ಮಧ್ಯ ನಿಸರ್ಗದ ಮಡಿಲಲ್ಲಿ ಇರುವ ಹತ್ತು ಸಾವಿರ ಜನ ಸಂಖ್ಯೆ ಇರುವ ಪುಟ್ಟ ಊರು ಚಂದನ ಗಿರಿ. ಇಲ್ಲಿಯ ಪ್ರಗತಿ ಸುವರ್ಣ ಬ್ಯಾಂಕ್, ಶಾಖಾ ವ್ಯವಸ್ಥಾಪಕ, ರತ್ನಾಕರ್ ಎಂದಿನಂತೆ ಸೋಮವಾರ ಬೆಳಗ್ಗೆ ಬಸ್ ಮೂಲಕ ಹದಿನೈದು ಕಿಲೋಮೀಯರ್ ದೂರ ಇರುವ ರಾಘವ್ ಪೂರ್ ಟೌನ್ ನಿಂದ ಆಗಮಿಸಿದ. ಅಂದು ದಾರಿಯಲ್ಲಿ ಬಸ್ ಕೆಟ್ಟು ಚಂದನ ಗಿರಿ ಮುಟ್ಟುವದಕ್ಕೆ ಮಧ್ಯಾನ್ಹ ಹನ್ನೆರಡು ಗಂಟೆ. ಬ್ಯಾಂಕಿನ ವ್ಯವಹಾರದ ಸಮಯ 10 ಗಂಟೆ. ಬೇಸಿಗೆ ಬಿಸಿಲು ಪ್ರಖರ ವಾಗಿತ್ತು. ಬಸ್ ನಿಲ್ದಾಣ ಬಿಕೋ ಎನ್ನುವ ಹಾಗೆ ಇತ್ತು.ಅಲ್ಲಿಂದ ಬ್ಯಾಂಕ್ ಶಾಖೆ ಎರಡು ಕಿಲೋ ಮೀಟರ್ ದೂರ. ದಿನಾಲು ರತ್ನಾಕರ್ ಆಟೋ ದಲ್ಲಿ ಹೋಗುವರು. ಅಂದು ಊರಲ್ಲಿ ಇರುವ ಎರಡೂ ಆಟೋ ಇಲ್ಲ. ಆಗಲೇ ಎರಡು ಗಂಟೆ ವಿಳಂಬ. ಬ್ಯಾಂಕ್ ಹೋಗಲು ಏನೂ ಸೌಕರ್ಯ ಇಲ್ಲ. ಬ್ಯಾಂಕ್ ನಲ್ಲಿ ರತ್ನಾಕರ ಒಬ್ಬನೇ