ವಿನಾಶ ಕಾಲೇ ವಿಪರೀತ ಬುದ್ದಿ

  • 10.9k
  • 1
  • 4k

ವಿನಾಶ ಕಾಲೇ ವಿಪರೀತ ಬುದ್ಧಿ(ಪಾಪಕ್ಕೆ ಪ್ರಾಯಶ್ಚಿತ್ತ ಇದೇ ಜನ್ಮದಲ್ಲಿ-ಕಥೆ)ಲೇಖಕ- ವಾಮನಾ ಚಾರ್ಯಬೆಂಗಳೂರು ಕಡೆಗೆ ಹೋಗುವ ರೈಲು ರಾಘವಪುರ ನಿಲ್ದಾಣಕ್ಕೆ ಆಗಮಿಸಿದಾಗ ಸಾಯಂಕಾಲ ಏಳು ಗಂಟೆ. ವಿದ್ಯುತ್ಕ್ಷಕ್ತಿ ಸರಬರಾಜು ಮೂರು ಸೆಕೆಂಡ್ ಸ್ಥಗಿತ ವಾಗಿ ಪ್ರಯಾಣಿಕರು ಪರದಾಟದಲ್ಲಿಯೇ ಬೋಗಿ ಹತ್ತಲು ಎಲ್ಲಿಲ್ಲದ ಶಕ್ತಿ ಪ್ರದರ್ಶನ ಮಾಡಬೇಕಾಯಿತು. ಇದರಿಂದ ರೈಲು ನಿರ್ಗಮನ ವಾಗಲು ಸ್ವಲ್ಪ ಸಮಯ ವಿಳಂಬ ವಾಯಿತು.ಪ್ರವೀಣ್ ಸೋಮಪುರ್, ಅವರ ಪತ್ನಿ ಪ್ರತಿಮಾ ಹಾಗೂ ಹದಿನೈದು ವರ್ಷದ ಮಗ ಸುಪ್ರೀತ್ ರಿಜರ್ವ್ ಬರ್ತ್ ಸಂಖ್ಯೆ ಎಸ್ 35, 36, ಮತ್ತು 37 ರಲ್ಲಿ ಆಸೀನರಾದರು. ಸೋಮಪುರ್ ಕುಟುಂಬ ಎರಡು ದಿವಸ ಗಳ ಹಿಂದೆ ರಾಘವ್ ಪುರ ಕ್ಕೆ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದರು. ಹದಿನೈದು ವರ್ಷದ ಹಿಂದೆ ಅವರಿಬ್ಬರು ರಾಘವಪುರ್ ದಲ್ಲಿ ಶಿಕ್ಷಕರು ಎಂದು ಕೆಲಸ ಮಾಡು ವಾಗ ಸುಪ್ರೀತ್ ನ ಜನನ ವಾಯಿತು. ರೈಲು ಬಿಡುವಾಗ ಅವಸರದಲ್ಲಿ ಒಬ್ಬ ವಯಸ್ಸಾದ ಮಹಿಳೆ ಬಂದು ಬರ್ತ ಸಂಖ್ಯೆ 35 ತನ್ನದು ಎಂದು ಪ್ರವೀಣ್ ಜೊತೆಗೆ