ಆಗೋದೆಲ್ಲ ಒಳ್ಳೇದಕ್ಕೆ

  • 9.5k
  • 1
  • 3.2k

ಆಗೋದೆಲ್ಲ ಒಳ್ಳೇದಕ್ಕೆ (ಹಾಸ್ಯ ಭರಿತ ಪ್ರೇಮ ಕಥೆ) ಲೇಖಕ ವಾಮನಾಚಾರ್ಯಒಂದು ವಾರದ ಹಿಂದೆ ಮದುವೆ ಆದ ಪುಷ್ಪಾ ಹಾಗೂ ಮಕರಂದ ತಮ್ಮ ನೂತನ ಮನೆ 'ಚಂದಿರ' ದ ವಾಸ್ತು ಶಾಂತಿ ಅದ್ಧೂರಿ ಯಾಗಿ ಮುಗಿಸಿ ಅಲ್ಲಿಯೇ ವಾಸ ಮಾಡಿದರು. ರಾಘವಪುರ್ ನಗರದ ಹೊರವಲಯದ ಆದರ್ಶ ಬಡಾವಣೆ ಯಲ್ಲಿ ಕಟ್ಟಿದ ಇದು ಮೊದಲ ಮನೆ. ಮರು ದಿವಸ ಭಾನುವಾರ ಬೆಳಗಿನ ಏಳು ಗಂಟೆಗೆ ಕಾಫಿ ರುಚಿಯನ್ನು ಸವಿಯುತ್ತ ಸರಸ ಸಲ್ಲಾಪ ಮಾಡುತ್ತಿದ್ದ ಅವರಿಗೆ ತಮ್ಮ ಜೀವನ ದಲ್ಲಿ ಆದ ಒಂದು ಮರೆಯಲಾಗದ ಅನುಭವ ನೆನಪು ಮಾಡಿಕೊಂಡರು. "ಮಕರ0ದ, ಕಳೆದ ವರ್ಷ ಜೋಗ್ ಜಲಪಾತ ನೋಡಲು ಹೋಗಿದ್ದೆ. 253 ಮೀಟರ್ ಆಳಕ್ಕೆ ಧೂಮ್ಮಿಕ್ಕುವ ರಮಣೀಯ ದೃಶ್ಯ ಕಣ್ತುಂಬಿ ಕೊಳ್ಳಲು ಎರಡು ಕಣ್ಣು ಸಾಲದು. ಕಾಮನ ಬಿಲ್ಲು ಕಾಣುವ ಸುಂದರವಾದ ದೃಶ್ಯ ಇವುಗಳನ್ನು ವೀಕ್ಷಿಸಿ ಆನಂದ ವಾಯಿತು. ನನ್ನ ಪಕ್ಕದಲ್ಲಿ ಇರುವ ನೀನು ಅಪರಿಚಿತ. ಆಗ ನಾವು ನಿಸರ್ಗ ತಾಣಕ್ಕೆ ಬಂದ ಪ್ರವಾಸಿಗರು. ಜಲಪಾತದ ಬೋರ್ಗರೆಯುವ