ಸೊಪ್ಪು ಮಾರುವ ಭೂಪರು

  • 6.3k
  • 2k

ಸೊಪ್ಪು ಮಾರುವ ಭೂಪರು(ಚಿಕ್ಕ ಹಾಸ್ಯ ಕಥೆ)ಲೇಖಕ - ವಾಮನಾಚಾರ್ಯಮುರುಕಲು ಹಳೆಯ ಸಾಯಕಲ್ ಮೇಲೆ ಹಿಂದುಗಡೆ, ಮುಂದುಗಡೆ, ಮಧ್ಯದಲ್ಲಿ ತರಕಾರಿ ತುಂಬಿದ ಬ್ಯಾಗ್ ಗಳು, ನೀರಿನ ಬಾಟಲ್ ಇಟ್ಟುಕೊಂಡು ಪೆಡಲ್ ತುಳಿಯುತ್ತ ರಸ್ತೆ ಮೇಲೆ ವಯಸ್ಸಾದ ಮನುಷ್ಯ ‘ಸೊಪ್ಪು, ಸೊಪ್ಪು’ ಎಂದು ಕೂಗುತ್ತಿದ್ದ. ಬಿಸಿಲು ತಾಪ ದಿಂದ ತೊಂದರೆ ಆಗಬಾರದು ಎಂದು ತಲೆಗೆ ಪಂಚೆ ಸುತ್ತಿ ಕೊಂಡಿದ್ದ. ಪವನ್ ಪುರ ನಗರದ ಪ್ರಶಾಂತ್ ಬಡಾವಣೆ ಯ ಮೂರನೇ ರಸ್ತೆ ಯಲ್ಲಿ ಇರುವ ಮನೆ ನಂಬರ್ 1645 ಮುಂದೆ ನಿಲ್ಲುವದು ಅವನ ದಿನ ನಿತ್ಯದ ಕಾರ್ಯಕ್ರಮ. ಆಗ ಸಮಯ ಬೆಳಗಿನ ಒಂಭತ್ತು ಗಂಟೆ. ಮನೆಯಲ್ಲಿದ್ದ ಹಿರಿಯ ಮನುಷ್ಯ ಬಾಗಿಲು ತೆಗೆದು ತರಕಾರಿ ವ್ಯಾಪಾರ ಮಾಡಿ ಹಣ ಕೊಡುವಾಗ, “ಏನಯ್ಯ, ನಿನ್ನ ಹೆಸರು?” ಎಂದು ಕೇಳಿದ. “ಸಾರ್, ನನ್ನ ಹೆಸರು ದೊಡ್ಡ ಭೂಪಯ್ಯ.”“ಈ ಪ್ರಖರವಾದ ಬಿಸಿಲಿನಲ್ಲಿ, ಭಾರವಾದ ತರಕಾರಿ ಚೀಲಗಳು ಇಟ್ಟುಕೊಂಡು ಸಾಯಕಲ್ ನಡೆಸುತ್ತ ಬೀದಿ, ಬೀದಿ ಅಲೆದಾಡುತ್ತ ಕೂಗುತ್ತ ಇದ್ದಿ. ವಯಸ್ಸಾದ ನಿನಗೆ ಇಂತಹ