ಕನಸಿನ ಕನ್ಯೆ

  • 12.7k
  • 3
  • 3.6k

ಕನಸಿನ ಕನ್ಯೆ (ಪ್ರೇಮ ಕತೆ- ವಾಮನಾಚಾರ್ಯ) ಇಂಜಿನಿಯರಿಂಗ್ ಪದವಿ ಮುಗಿಸಿ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಅರುಣ್ ಗೆ ನಸುಕಿನ ಆರು ಗಂಟೆಗೆ ಏಳುವ ಅಭ್ಯಾಸ. ಅಂದು ಏಳು ಗಂಟೆ ಆದರೂ ಏಳಲಿಲ್ಲ. ಮಳೆಗಾಲ ಇರುವದರಿಂದ ಆಕಾಶದಲ್ಲಿ ಮೋಡಗಳು ಕವಿದು ತಂಪಾದ ಹವಾಮಾನ. ಧಾರಾಕಾರ ಮಳೆ ಆಗುವ ಎಲ್ಲ ಲಕ್ಷಣಗಳು ಕಂಡು ಬಂದವು. ಅವನ ತಾಯಿ ಮಗನಿಗೆ ಎಬ್ಬಿಸಲಿಲ್ಲ. ಅಂದು ಭಾನುವಾರ. ಆ ಸಮಯದಲ್ಲಿ ಅವನು ಕನಸಿನ ಲೋಕದಲ್ಲಿ ವಿಹಾರ ಮಾಡಿದ.ಪಾರ್ಕಿನಲ್ಲಿ ಬೆಳಗಿನ ವಾಯು ವಿಹಾರಕ್ಕೆ ಆಗಮಿಸಿದ ಬಹಳಷ್ಟು ಜನರು ಮಳೆ ಬರುವವರಿಗೆ ತಂಪಾದ ಹವಾಮಾನದ ಆನಂದ ಅನುಭವಿಸಿದರು. ಎರಡು ಸಲ ಫೋನ್ ರಿಂಗ ಆದಮೇಲೆ ಮನಸ್ಸು ಇಲ್ಲದ ಮನಸ್ಸಿನಿಂದ ಫೋನ್ ಎತ್ತಿದ. ಆ ಕಡೆಯಿಂದ ಹುಡುಗಿಯ ಮಧುರ ಧ್ವನಿ."ಗುಡ್ ಮಾರ್ನಿಂಗ್ ಅರುಣ್, ಇನ್ನೂ ಮಲಗಿದ್ದಿಯಾ? ನಾನು ನಿನ್ನ ಡ್ರೀಮ್ ಗರ್ಲ್ ಪಾರ್ಕನಲ್ಲಿ ಕಾಯುತ್ತಾ ಇದ್ದೇನೆ ಬೇಗ ಬಾ." ಅರುಣ್ ಕೊಡಲೇ ಬಟ್ಟೆ ಬದಲಾಯಿಸದೆ ಹಾಗೆ ಪಾರ್ಕಗೆ ಹೊರಟ. ಹೋಗುವಾಗ