ಸಾರಿಕೆ - 3

  • 15.3k
  • 6.6k

ಸಾರಿಕೆ ಮರುದಿವಸ ಮಧ್ಯಹ್ನದ ಹೊತ್ತಿಗೆ ಕಣ್ಣು ತೆರೆದಳು . ಅಲ್ಲೇ ಹತ್ತಿರದಲ್ಲಿ ನಿಂತು ಅವಳ ಪ್ರಜ್ಞೆ ಬರುವುದಕ್ಕಾಗಿ ಕಾಯುತ್ತಿದ್ದ ವ್ಯಕ್ತಿ ಅದನ್ನು ನೋಡಿ ಮೃದು ಧ್ವನಿಯಲ್ಲಿ " ಇಷ್ಟು ಹೊತ್ತು ಬೇಕಾಯಿತಾ ಎದ್ದೇಳಲು" ಎಂಬ ದ್ವನಿ ಅವಳ ಕಿವಿಗಳಿಗೆ ಸುಳಿದ ಹಾಗೆ ಅನಿಸಿತು . ದ್ವನಿ ಬಂದ ಕಡೆಗೆ ಸಾರಿಕೆ ನೋಡಿದಳು , ಅಲ್ಲಿ ಒಬ್ಬ ಮನುಷ್ಯ ನಗುತ್ತಾ ನಿಂತ್ತಿದ್ದ . ಅವನ ಮುಖವನ್ನು ಸುರಭಿಯು ಇಲ್ಲಿ ತನಕ ನೋಡಿರಲಿಕ್ಕೆ ಇಲ್ಲ , ಹಾಗಾಗಿ ಸುರಭಿಯ ನೆನಪಿನ ಪುಟಗಳಲ್ಲಿ ಅವನ ಬಗ್ಗೆ ಯಾವುದೇ ದಾಖಲೆಗಳು ಇರಲ್ಲಿಲ್ಲ , ಹಾಗಾಗಿ ಸಾರಿಕೆ ಅವನನ್ನು ಗುರುತಿಸಲು ಸಾದ್ಯವಾಗಲ್ಲಿಲ .ಆ ಮನುಷ್ಯ ನೋಡಲು ಶ್ವೇತ ವರ್ಣದವನು , ದೃಢ ಕಾಯದ ಮನುಷ್ಯ , ಕಾಂತಿಯುಕ್ತವಾದ ಮುಖ , ಬಲಿಷ್ಟವಾದ ಭುಜಗಳು , ಅಷ್ಟೇ ಅಲ್ಲದೆ ಅವನ ಕಡು ನೀಲಿ ಕಣ್ಣುಗಳಲ್ಲಿ ಯಾವುದೋ ರೀತಿಯ ಸೆಳೆತವಿತ್ತು . ಅದೇ ಸಮಯಕ್ಕೆ ಸರಿಯಾಗಿ ದೊಡಪ್ಪಾ ಪಾರ್ಥ ಸೇನಾ ಸುರಭಿಯನ್ನು