Quotes by Mukesh Datar R in Bitesapp read free

Mukesh Datar R

Mukesh Datar R

@mukeshdatarr7684


ಹುಟ್ಟು ಹುಟ್ಟಲಿಲ್ಲ!!! ಸಾವು ಸಾಯಲ್ಲಿಲ್ಲ!!!
ಹುಟ್ಟಿನಲ್ಲಿ ಆ ಕ್ಷಣದ ಸಾವು...
ಸಾವಿನಲ್ಲಿ ಆ ಕ್ಷಣದ ಹುಟ್ಟು...
ಇದನರಿತು ಸ್ಥಿತಿ  ಕ್ಷಣದಲ್ಲಿ ನೆಡೆದವ ಬಿಡಿಸಿಕೊಳ್ಳಬಲ್ಲ  ಜೀವನದ ಗುಟ್ಟು...


ಹುಟ್ಟು ಸಾವು ಹುಟ್ಟಿದ್ದು ಎಲ್ಲಿ...
ಇದೆರಡರ ಸಾಕ್ಷಿಗೆ ನಮಗರಿವಿಲ್ಲದೆ ಬಂದೆವು ನಾವಿಲ್ಲಿ... ಪ್ರತಿ ಕ್ಷಣದ ಹುಟ್ಟಲ್ಲಿ ಹೊಸತನ್ನು ಕಲಿತರೆ ನಾವಲ್ಲಲ್ಲಿ... .
ಸತ್ತ ಕ್ಷಣದಲ್ಲಿ ಪ್ರತಿಯೋಬ್ಬರ ಮನದಿ ಅಚ್ಚಳಿಯದೆ ಹುಟ್ಟುವೆವು ಪ್ರತಿ ನಿತ್ಯವಿಲ್ಲಿ...


ಸಾಯುವ ಪ್ರತಿ ಘಳಿಗೆಯ ಆ ಹುಟ್ಟಿನಲ್ಲಿ...
ಅನ್ವೇಶಣೆಗಳು ನಮ್ಮದಾಗಲಿ ಆ ಸ್ಥಿತಿ ಪ್ರಜ್ಞೆಯಲ್ಲಿ...
ಹುಟ್ಟುವ ಕ್ಷಣಗಳ ಅರಿತು ಒಡೆಯರಾದರೆ ನಾವಿಲ್ಲಿ...
ಸಾಯುವ ಕ್ಷಣಗಳಿಂದಾಚೆಗೆ ಸೇರಬಲ್ಲೆವು ನಮ್ಮೊಳಗಿನ ಹುಟ್ಟು ಸಾವುಗಳಿರದ ಸಚ್ಚಿದಾನಂದಾತ್ಮನಲ್ಲಿ...


"ಕೃಷ್ಣಾರ್ಪಣ ಮಸ್ತು"...

--ಮುಕೇಶ್ ದಾತಾರ್. ರ್...

Read More